There are no items in your cart
Add More
Add More
Item Details | Price |
---|
ಅಧ್ಯಾಪಕರು: ಸತೀಶ್ ಭಟ್
Validity Period: 365 days
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ NCERT ದೆಹಲಿ ಇವರು ಪ್ರತಿವರ್ಷ ಎಂಟನೆಯ ತರಗತಿ ವಿದ್ಯಾರ್ಥಿಗಳಿಗೆ National Means-Cum-Merit Scholarship (NMMS) ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾ ಅನ್ವೇಷಣೆ ಪರೀಕ್ಷೆ (NTSE) ನಡೆಸುತ್ತಾರೆ. ಈ ಪರೀಕ್ಷೆಯಲ್ಲಿ ೨ ಭಾಗಗಳಿರುತ್ತದೆ - ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (GMAT) ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆ (SAT).
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಪರೀಕ್ಷೆಗಳ ಮೂಲಕ ಗುರುತಿಸಿ ವಿದ್ಯಾರ್ಥಿ ವೇತನ ನೀಡುವುದು ಶಿಕ್ಷಣ ಇಲಾಖೆಯ ಮುಖ್ಯ ಉದ್ದೇಶ. ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯ ತಯಾರಿಗಾಗಿ ನಡೆಸುವ ಅಧ್ಯಯನದ ಮೂಲಕ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಶ್ಯವಿರುವ ಸಮಸ್ಯೆ ಪರಿಹರಿಸುವ ಕುಶಲತೆ, ಸೃಜನಶೀಲತೆಯನ್ನು ಕಲಿಯಲು ಸಹಾಯವಾಗುತ್ತದೆ.
ಈ ಪರೀಕ್ಷೆಗಳ ಮೊದಲ ಭಾಗವಾದ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (GMAT) ಯಲ್ಲಿ ನೀಡುವ ಪ್ರಶ್ನೆಗಳ ವಿಷಯ, ವಿಧಾನ ಹಾಗೂ ಕೌಶಲಗಳನ್ನು ವಿದ್ಯಾರ್ಥಿಗಳು ಶಾಲಾ ಪಠ್ಯಪುಸ್ತಕಗಳಿಂದ ಕಲಿತಿರುವುದಿಲ್ಲ. ಹೀಗಾಗಿ ಈ ಪರೀಕ್ಷೆಯನ್ನು ಎದುರಿಸಲು ಪ್ರತ್ಯೇಕ ತರಬೇತಿ, ಅಭ್ಯಾಸ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ವೇಗ ಮತ್ತು ನಿಖರತೆ ಈ ಪರೀಕ್ಷೆಯ ಯಶಸ್ಸಿಗೆ ಬಹಳ ಮುಖ್ಯ.
ಈ ಕೋರ್ಸ್ ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಕಲಿಕೆಯ ಎರಡನೆಯ ಹಂತದ ಪಾಠಗಳು, ಅಭ್ಯಾಸ ಪರೀಕ್ಷೆಗಳು ಇವೆ. ಆಸಕ್ತ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಕ್ಷೇತ್ರದ ಕಾರ್ಯಕರ್ತರು ಈ ಕೋರ್ಸ್ ಅನ್ನು ತಾವು ಪೂರ್ಣಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕೆಂಬುದೇ ನಮ್ಮ ಆಶಯ.
ಮುಖ್ಯ ಅಂಶಗಳು
೧. ಈ ಕೋರ್ಸ್ ನ ಆಕರ ಪುಸ್ತಕ 'NTSE ಸಮಗ್ರ ಕೈಪಿಡಿ': ಇದರ ಲೇಖಕರು ಶ್ರೀ ಎಸ್. ಎ. ಭಟ್ , ನಿವೃತ್ತ ಪ್ರಾಂಶುಪಾಲರು , ಜನತಾ ವಿದ್ಯಾಲಯ ಸಂಸ್ಥೆಗಳು. ಇವರು ಮೂರು ದಶಕಗಳಿಂದ ಬೌದ್ಧಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಶೆಗಳಿಗೆ ತರಬೇತಿ ನೀಡಿ ಬಹಳಷ್ಟು ಯಶಸ್ವಿ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ.
ಈ ಪುಸ್ತಕದ ಪ್ರತಿಗಾಗಿ info@arivu.org.in ಅಥವಾ ವಾಟ್ಸಾಪ್ ಮೂಲಕ 9448457973 ಯನ್ನು ಸಂಪರ್ಕಿಸಿ.
೨. ಈ ಕೋರ್ಸ್ ನಲ್ಲಿರುವ ವಿಡಿಯೋ ಪಾಠಗಳನ್ನು ನೀಡಿರುವವರು ಶ್ರೀ ಸತೀಶ್ ಭಟ್, ಮುಖ್ಯಾಧ್ಯಾಪಕರು, ಶ್ರೀ ರಾಮಕುಂಜ ಪ್ರೌಢಶಾಲೆ, ರಾಮಕುಂಜ , ಕಡಬ ತಾಲೂಕು. ಕಳೆದ 25 ವರ್ಷಗಳಿಂದ ಇವರು ಅತ್ಯಂತ ಯಶಸ್ವೀ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗಣಿತ, ವಿಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯ ಕುಶಲತೆ ಯ ಶಿಕ್ಷಕರಾಗಿದ್ದಾರೆ. ಇವರ ಯೂಟ್ಯೂಬ್ ವಾಹಿನಿ - https://www.youtube.com/channel/UCqfeb3pqjVOlFFdY_LMYxeQ
೩. ಈ ಕೋರ್ಸ್ ಗೆ ಸಂಬಂಧಿಸಿದ ಸುಮಾರು ಪ್ರಶ್ನೆಗಳನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಟೈಪ್ ಮಾಡಿಕೊಟ್ಟವರು 'ಜನತಾ ವಿದ್ಯಾಲಯ, ಕಡತೋಕಾ - ಹೊನ್ನಾವರ ತಾಲೂಕು, ಉತ್ತರ ಕನ್ನಡ' ದ ವಿದ್ಯಾರ್ಥಿಗಳು. ಅವರಿಗೆಲ್ಲ ಹೃತ್ಪೂರ್ವಕ ಕೃತಜ್ಞತೆಗಳು.
Why this course?

After successful purchase, this item would be added to your courses.You can access your courses in the following ways :